ಕಣ್ಣಲೇ ಕರೆಯೋಲೆಯ ನೀಡಿ ಕರೆದೊಯ್ಯುವೆಯ ನನ್ನನು
ಮನಸು ಮರುಳಾಗಿ ಮರೆತು ಹೋಗಿದೆ ನಾ ನೋಡಲು ನಿನ್ನನು
ಬಾಳ ಪಯಣ ಅನಿಸುತಿರಲು ಬಹಳ ದೂರ
ಕೈ ಜೋಡಿಸಿ ನೇಡೆ ನಾಲ್ಕು ಹೆಜ್ಜೆ ಇಳಿಸಿ ಮನದ ಭಾರ
ಪ್ರತಿ ಕ್ಷಣ ಜೊತೆಯಲಿ ಇರುತ ತಿಳಿಸು ಒಲವಿನ ಸಾರ
ಕಡಲಾಚೆ ಮುಗಿಲಾಚೆ ಕೈ ಹಿಡಿದು ಸಾಗೋಣ
ಪ್ರೀತಿಯಲಿ ಇಬ್ಬರೂ ಮನಸಾರೆ ಮಾಗೋಣ
ಪ್ರೀತಿಯ ಇ ಅದ್ಭುತ ಕಲೆಗೆ ತಲೆಯ ಬಾಗೋಣ
ಶಿವಪ್ರಸಾದ ಮಿಣಜಿಗಿ