Thank you message


Saturday, 6 June 2026

ಪರಿಚಯವಿಲ್ಲದ ಮನಸಿನ ಜೊತೆ ಹೇಗೆ ಮಾತನಾಡಲಿ ನಾನು...

ಪರಿಚಯವಿಲ್ಲದ ಮನಸಿನ ಜೊತೆ ಹೇಗೆ ಮಾತನಾಡಲಿ ನಾನು
ಓ ಮನಸೆ ತುಸು ಸಹಾಯ ಮಾಡುವೆಯ ಪ್ರೀತಿಯ ಹೇಳಲು ನೀನು

ರಕ್ತದಲಿ ಬರೆದು ಕೊಡಲೆ ಪ್ರೀತಿ ನಿವೇದನೆಯ ಓಲೆಯ
ಹೇಳಲೆ ಒಲವಿನ ಪ್ರೀತಿಯ ಹಾಕುತ ಪದಗಳ ಮಾಲೆಯ
ಹೇಗೆ ನಾ ಪ್ರಭಾವಿಸಲಿ ಆ ಮುದ್ದು ಬಾಲೆಯ

ಮಲ್ಲಿಗೆಯ ಹೂವನು ಕೊಟ್ಟು ಹೇಳಲೆ ಪ್ರೀತಿಯ ವಿಷಯ 
ಮೋಡಿಯ ಮಾಡುತ ಹಚ್ಚಲೇ ಅವಳಿಗೆ ಪ್ರೀತಿಯ ನಿಶೆಯ
ಹೇಗೆ ನಾ ಪ್ರಭಾವಿಸಲಿ ನನ್ನ ಬಾಳ ಉಷೆಯ 

                                             ಶಿವಪ್ರಸಾದ ಮಿಣಜಿಗಿ

Saturday, 30 May 2026

ಅನುರಾಗ ಅರಳಲು ಕಾರಣವು ತಿಳಿಯದು...

ಅನುರಾಗ ಅರಳಲು ಕಾರಣವು ತಿಳಿಯದು
ಪ್ರೀತಿಯಲಿ ಮುಳುಗಲು ತೆಲುಗೇನು ಹೊಳೆಯದು

ಕಾರ್ಮೋಡ ಮಳೆಯಾಗಿ ಸುರಿದು ಭುವಿಗೆ ಪ್ರೀತಿಯ ಉಣಿಸಿದೆ
ಒಲವಿನ ಪ್ರೀತಿಯು ಹೃದಯವನು ನಿನ್ನೆಡೆಗೆ ಮಣಿಸಿದೆ
ನಿ ಜೊತೆಗಿರದ ದಿನಗಳನು ನೋವಿನ ವಿರಹದಲಿ ಎಣಿಸಿದೆ

ನೋಡುತ ಕುಳಿತೆನು ಆ ನಿನ್ನ ಸುಂದರ ಕಣ್ಣಣೆ
ಮಾಡಲು ಆಗದು ಯಾವ ಪದಗಳಿಗೆ ನಿನ್ನಯ ಬಣ್ಣನೆ
ಒಮ್ಮೆ ನಿ ಕೊಟ್ಟುಬಿಡು ನನ್ನ  ಪ್ರೀತಿಗೆ ನಿನ್ನಯ ಮನ್ನಣೆ

                                           ಶಿವಪ್ರಸಾದ ಮಿಣಜಿಗಿ

Saturday, 23 May 2026

ನೋಡು ನೋಡುತಲೆ ಒಲವಿನ ಪ್ರೀತಿ ಹೆಚ್ಚಾಗಿದೆ...

ನೋಡು ನೋಡುತಲೆ ಒಲವಿನ ಪ್ರೀತಿ ಹೆಚ್ಚಾಗಿದೆ
ಕಣ್ಣ ನೋಟಕೆ ಹೃದಯವು ತುಸು ಹುಚ್ಚಾಗಿದೆ

ಅಧರಗಳು ನನ್ನಿಂದ ಏನೇನೊ ಬಯಸಿವೆ
ಮೋಡಿಯ ಮಾಡುತ ಸನಿಹಕೆ ನನ್ನನು ಕರೆಸಿವೆ
ಅಧರಗಳ ಬಂಧನವು ಜಗವನೇ ಮರೆಸಿವೆ

ಇಲ್ಲಾ ಎನ್ನಲು ಮನಸಾಗದು ನಿನ್ನ ಕಣ್ಣ ನೋಟ ಕರೆದರೆ
ಉಸಿರು ನಿಂತ ಹಾಗಿದೆ ಸ್ವಲ್ಪ ಮರೆಗೆ ನಿ ಸರೆದರೆ
ಯಾರು ಕೂಡ ಬರೆದಿರಬಾರದು ನಿನ್ನ ಬಣ್ಣನೆ ಬರೆದರೆ

                                           ಶಿವಪ್ರಸಾದ ಮಿಣಜಿಗಿ

Saturday, 16 May 2026

ಕನಸುಗಳ ಕಾರಂಜಿಯಂತೆ ಚಿಮ್ಮಿದೆ ಪ್ರೀತಿಯ ಚಿಲುಮೆ...

ಕನಸುಗಳ ಕಾರಂಜಿಯಂತೆ ಚಿಮ್ಮಿದೆ ಪ್ರೀತಿಯ ಚಿಲುಮೆ
ಸದಾ ಬಯಸಿದೆ ಮನಸು ನಿನ್ನ ಪ್ರೇಮದ ಒಲುಮೆ

ನೋಡಿರದ ಊರಿಗೆ ಹೃದಯದ ಪಯಣ ಸಾಗಿದೆ
ಜೊತೆಯಲಿ ನೆಡೆಯಲು ನಿನ್ನ ಕಿರುಬೆರಳು ತಾಗಿದೆ
ಹೃದಯವೆ ಹೇಳಬೇಕಿದೆ ಪಯಣದ ಅನುಭವ ಹೇಗಿದೆ

ಮಿಂಚನ್ನು ಬೆನ್ನ ಹತ್ತಿದ ಗುಡುಗಿನಂತೆ ನಾನು
ಬೆಳದಿಂಗಳ ಇರುಳಲಿ ಅರಳುವ ಪಾರಿಜಾತದಂತೆ ನೀನು
ಭುವಿಯ ಒಲವಿನ ಕರೆಗೆ ಪ್ರೀತಿಯ ಮಳೆಹನಿ ಸುರಿಸದೆ ಬಾನು
 
                                                     ಶಿವಪ್ರಸಾದ ಮಿಣಜಿಗಿ