ಮನಸು ಮಾಗಿದೆ ಮುದ್ದಾದ ಹೃದಯದ ಮಿಡಿತಕೆ
ಕನಸು ಕಾಡಿದೆ ಕನವರಿಕೆಯಲಿ ಕಣ್ಣ ರೆಪ್ಪೆಯ ಬಡಿತಕೆ
ನೋಡುವ ಆಸೆಯು ಹೃದಯಕೆ ಇಂದು ನಿನ್ನನು
ಒಮ್ಮೆಯಾದರೂ ನಿ ನೆನಪಿಸಿಕೊ ಕನಸಲಿ ನನ್ನನು
ಮರೆತಿದೆ ಮರುವಿನಲಿ ಹೃದಯವು ತಾನೇ ತನ್ನನು
ಕಣ್ಣ ಮುಚ್ಚಿ ನೆಡೆದರೂ ಕಣ್ಣ್ಮುಂದೆ ಬಂದು ಕಾಡತಿ
ಮರೆಯಲ್ಲೆ ನಿಂತು ಕಣ್ಣ ಸನ್ನೆಯಲೇ ಮೋಡಿಯ ಮಾಡತಿ
ಒಲವಿನ ಗೀತೆಯ ಪ್ರೀತಿಯ ಕಂಠದಿ ಎಷ್ಟು ಚಂದ ನಿ ಹಾಡತಿ
ಶಿವಪ್ರಸಾದ ಮಿಣಜಿಗಿ