ಮಣ್ಣಿನ ಗಂಧದ ಸುವಾಸನೆಯಂತೆ ನಿನ್ನಯ ಪ್ರೀತಿ
ಭುವಿಯ ಕೆನ್ನೆಗೆ ಮಳೆಹನಿ ಮುತ್ತಿಡುವುದೇ ಒಲವಿನ ರೀತಿ
ಎಲ್ಲೊ ಹೊರಟ ಮೋಡಕೆ ಧರೆಯು ಕಣ್ಣ ಸನ್ನೆಯ ಮಾಡಿದೆ
ತಂಗಾಳಿಯ ಕಳಿಸಿ ಒಲವಿನ ಸಂದೇಶವನು ಧರೆಯು ನೀಡಿದೆ
ಸಂದೇಶದ ಸ್ಪರ್ಶಕೆ ಮೋಡದಿ ಒಲವು ತಂತಾನೆ ಮೂಡಿದೆ
ಮೋಡವು ಕರಗಿ ನೀರಾಗಿ ಬಾನಿಂದ ಭುವಿಗೆ ಜಾರಿದೆ
ಮಳೆಹನಿಯ ಸ್ಪರ್ಶಕೆ ಧರೆಯ ವಿರಹವು ಆರಿದೆ
ಮೋಡ ಧರೆಯ ಒಲವಿನ ಕತೆಯನು ಬಾನು ಜಗಕೆಲ್ಲ ಸಾರಿದೆ
ಶಿವಪ್ರಸಾದ ಮಿಣಜಿಗಿ