Thank you message


Saturday, 18 April 2026

ಸಾಗರದ ಅಲೆಗಳ ಸರಸ ಸಲ್ಲಾಪವು ತೀರದ ಜೊತೆಗೆ...

ಸಾಗರದ ಅಲೆಗಳ ಸರಸ ಸಲ್ಲಾಪವು ತೀರದ ಜೊತೆಗೆ
ಏನೆಂದು ನಾ ಹೆಸರಿಡಲಿ ಇ ಪ್ರಣಯದ ಕಥೆಗೆ

ಅಲೆಗಳು ತೀರದ ಕೆನ್ನೆಗೆ ಸವರಿ ಹೋಗುವ ಆಟ
ಪ್ರತಿ ಕ್ಷಣ ಹೇಳಿಕೊಟ್ಟಿದೆ ತೀರಕೆ ಪ್ರಣಯದ ಪಾಠ
ಅಲೆ ತೀರಗಳ ನಡುವೆ ಮರಳಿನದೇ ಬಲು ಪೀಕಲಾಟ

ಹೋದರೂ ಮತ್ತೆ ಪುನಃ ಬರುವೆ ನಿ ನನ್ನನು ನೋಡಲು
ಬಿಟ್ಟು ಇರಲು ಆಗದು ನಿ ಮೋಡಿಯ ಮಾಡಲು
ರಾತ್ರಿಯ ವೇಳೆಯಲಿ ಸೋನೆಯ ಸದ್ದಿನಲಿ ನನ್ನನು ನಿ ಕಾಡಲು

                                                       ಶಿವಪ್ರಸಾದ ಮಿಣಜಿಗಿ