Thank you message


Saturday, 11 April 2026

ನಿನ್ನ ಬೆರಳುಗಳು ಮುಂಗುರುಳನು ಸರಿಸುವ ವೇಳೆ...

ನಿನ್ನ ಬೆರಳುಗಳು ಮುಂಗುರುಳನು ಸರಿಸುವ ವೇಳೆ
ಹೃದಯದಲಿ ವಸಂತ ಕೋಗಿಲೆ ಕೂಗಿದೆ ಕೇಳೆ

ಕಣ್ಣಮುಚ್ಚಿ ಒಮ್ಮೆ ನೆನೆದರೆ ಸಾಕು ಕಣ್ಮುಂದೆ ಬರುವೆ
ಏಳು ಜನ್ಮಕೂ ಏಳೇಳು ಜನ್ಮಕೂ ಜೊತೆಯಲಿ ಇರುವೆ
ಪ್ರೀತಿಯ ಒಲವಿನ ಔತಣವನು ನಿನಗಾಗಿ ತರುವೆ

ಮರೆತರು ಮರೆಯಲು ಆಗದು ನಿನ್ನ ಆ ಮಂದಹಾಸ
ನಿನ್ನ ಆ ಹೃದಯದಲೇ ಇನ್ಮುಂದೆ ನನ್ನ ಒಲವಿನ ವಾಸ 
ಪ್ರೀತಿಯ ಹಾಡಿನಲಿ ಸದಾ ಕೂಡಿರಲಿ  ನಿನ್ನ ನನ್ನ ಪ್ರಾಸ

                                            ಶಿವಪ್ರಸಾದ ಮಿಣಜಿಗಿ