Thank you message


Saturday, 4 April 2026

ನಯನದ ನೋಟದಿ ಹೃದಯದ ಬಡಿತವು ಆಗಿದೆ ಹೆಚ್ಚು ಕಮ್ಮಿ...

ನಯನದ ನೋಟದಿ ಹೃದಯದ ಬಡಿತವು ಆಗಿದೆ ಹೆಚ್ಚು ಕಮ್ಮಿ
ಪ್ರೀತಿಯಲಿ ಬಿದ್ದ ಮೇಲೆ ಇರುಳಲಿ ಯಾಕೋ ಸ್ವಲ್ಪ ನಿದ್ದೆ ಕಮ್ಮಿ

ಹೃದಯದ ಹೂದೋಟದಿ ಪ್ರೀತಿಯ ಹೂವು ಅರಳಿ
ಮನದಲಿ ಪ್ರೀತಿಯು ಮುಂಗಾರು ಮಳೆಯಾಗಿದೆ ಮರಳಿ
ಹೃದಯವಿಂದು ಸೊರಗಿದೆ ತುಸು ವಿರಹದಲಿ ನರಳಿ

ಪ್ರೀತಿಯ ಜ್ವರವೇರಲು ಊಟವು ಯಾಕೋ ಸೇರದು
ಪ್ರತಿ ರಾತ್ರಿ ನಿನ್ನನು ನೆನೆಯದೆ ನಿದಿರೆಯು ಬಾರದು
ನಿ ನನ್ನ ಬಂದು ಸೇರುವವರೆಗೆ ವಿರಹದ ವೇದನೆ ಆರದು

                                             ಶಿವಪ್ರಸಾದ ಮಿಣಜಿಗಿ