ಸುಂದರ ಕ್ಷಣಗಳ ನಿನ್ನ ಜೊತೆ ಕಳೆಯುವ ಘಳಿಗೆ
ಹಾಕಿದೆ ನಿ ಹೃದಯದಿ ಪ್ರೀತಿಯ ಹೂವಿನ ಮಳಿಗೆ
ಸೂಸಿದೆ ಪ್ರೀತಿಯ ಹೂವಿನ ಪರಿಮಳವು ಹೃದಯದ ತುಂಬ
ಎಲ್ಲಿ ನೋಡಿದರಲ್ಲಿ ಕಾಣುತಿದೆ ಇ ಕಣ್ಣಿಗೆ ನಿನ್ನದೇ ಬಿಂಬ
ಏನೇ ಹೇಳು ನಿ ಪ್ರೀತಿಯಲಿ ನಾನು ತುಸು ಹುಂಬ
ಕೇಳದೆ ಹೃದಯದ ದನಿಯ ನಿನಗೆ ಪ್ರೀತಿಯಲಿ ನಾ ಕರೆದರೂ
ಜೀವ ನಿಲ್ಲಲಾರದು ನನ್ನ ಬಿಟ್ಟು ತುಸು ನಿ ಸರಿದರೂ
ನಿನ್ನಯ ವರ್ಣನೆಗೆ ಸಾಲದು ಯಾವ ಸಾಲು ಬರೆದರೂ
ಶಿವಪ್ರಸಾದ ಮಿಣಜಿಗಿ