ಹಿಡಿದರು ಹಿಡಿತಕೆ ಸಿಗುತಿಲ್ಲ ನನ್ನಯ ಇ ಮನಸು
ಕಣ್ಣ ಮುಚ್ಚಿದರೆ ಸಾಕು ಕಾಡುತಿದೆ ನಿನ್ನ ಆ ಕನಸು
ಜೊತೆ ನೆಡೆವಾಗ ಬೆರಳುಗಳು ತಾಗುವ ಆ ಸ್ಪರ್ಶವು
ಹೃದಯದಲಿ ಹೊಮ್ಮಿದೆ ಮರೆಯಲಾಗದ ಹರ್ಶವು
ಎರಡು ಮನಸುಗಳ ನಡುವೆ ನೆಡೆದಿದೆ ಪ್ರೀತಿಯ ಸಂಘರ್ಶವು
ನೀನಿಲ್ಲದೆ ಬರೆಯಲು ಆಗದು ಕವಿತೆಯ ಒಂದೂ ಸಾಲು
ಪ್ರೀತಿಯಲಿ ಮುಳಗಿ ಹೃದಯವಾಗಿದೆ ಸಕ್ಕರೆ ಹಾಲು
ನನ್ನಯ ಇ ನಿಷ್ಕಲ್ಮಶ ಪ್ರೀತಿಗೆ ನೀನೊಮ್ಮೆ ತುಸು ವಾಲು
ಶಿವಪ್ರಸಾದ ಮಿಣಜಿಗಿ