ಮರೆತರೂ ಮರೆಯಲು ಆಗದು ಆ ನಿನ್ನ ಕಣ್ಣ ಹೊಳಪನು
ಮತ್ತೆ ಮತ್ತೆ ಮರುಕಳಿಸಿದೆ ನಿನ್ನ ಕಣ್ಣ ನೋಟದ ನೆನಪನು
ಮೈಸೂರು ಮಲ್ಲಿಗೆಯ ಮುಡಿದು ಎದುರಿಗೆ ಬಂದರೆ ನೀನು
ಕರಗುವೆನು ಮಂಜಿನಂತೆ ನನಗೇನೇ ತಿಳಿಯದೆ ನಾನು
ಮಿಲನವಾದಂತೆ ಗೋಚರಿಸಿದೆ ಒಮ್ಮೆ ಭೂಮಿ ಹಾಗು ಬಾನು
ಹೃದಯ ಹೆದರಿ ನಿನ್ನ ಮುಂದೆ ನಿಂತ ವೇಳೆ
ಹೆದರಿದ ಹೃದಯದ ಬಡಿತ ನೀನೊಮ್ಮೆ ಕೇಳೆ
ಒಮ್ಮೆ ನೀನು ಪ್ರೀತಿಯ ಮಾತಲಿ ದೈರ್ಯವನು ಹೇಳೆ
ಶಿವಪ್ರಸಾದ ಮಿಣಜಿಗಿ