Thank you message


Saturday, 7 March 2026

ಮನಸಿನ ಮಾತು ಹೇಳಲು ನಿನಗೆ ಕಾತರ ನನಗೀಗ...

ಮನಸಿನ ಮಾತು ಹೇಳಲು ನಿನಗೆ ಕಾತರ ನನಗೀಗ
ನನ್ನಯ ಬಗೆಗೆ ಏನು ಅನಿಸುತಿದೆ ಬೇಗ ಹೇಳು ನಿನಗೀಗ

ಕಾಯಲು ಆಗದು ಇನ್ನು ನಿನ್ನ ಉತ್ತರ ಬರುವ ವರೆಗೆ
ಸರಿದರೂ ಸಹಿಸದು ಇ ಹೃದಯವು ತುಸು ನಿ ಮರೆಗೆ
ಒಮ್ಮೆಯಾದರು ಓಗೊಡುವೆಯ ಇ ಮನದ ಪ್ರೀತಿಯ ಕರೆಗೆ

ಬೆರಗಾಗಿದೆ ಹೃದಯವು ಹಂಸದ ಆ ನಿನ್ನ ನಡೆಗೆ
ತಿರುಗಿ ತಿರುಗಿ ನೋಡುತಿದೆ ಪ್ರತಿ ಕ್ಷಣವೂ ಮನಸು ನಿನ್ನ ಕಡೆಗೆ
ಮಲ್ಲಿಗೆಯ ಮುಡಿಸುವ ಅಸೆ ಆ ನಿನ್ನ ನಿಲುವಾದ ಜಡೆಗೆ

                                            ಶಿವಪ್ರಸಾದ ಮಿಣಜಿಗಿ