Thank you message


Saturday, 28 February 2026

ನಯನವು ನಯನವ ಸಂಧಿಸುವ ಘಳಿಗೆ...

ನಯನವು ನಯನವ ಸಂಧಿಸುವ ಘಳಿಗೆ
ಶುರುವಾಗಿದೆ ಹೃದಯದಲಿ ಪ್ರೀತಿಯ ಒಂದು ಮಳಿಗೆ

ಮಳೆಯ ಹನಿಗಳ ಹೂಮಳೆ ಸುರಿದಿದೆ ಇಳೆಗೆ
ಇದುವೇ ಕಾರಣ ಹೃದಯದಿ ಮೂಡಿದ ಪ್ರೀತಿಯ ಬೆಳೆಗೆ
ನಿನ್ನಯ ನೆನಪು ಒಂದೇ ಸಾಕು ನನ್ನಯ ಮುಖದ ಕಳೆಗೆ

ಏನೋ ಒಂದು ನಶೆಯು ತುಂಬಿದೆ ನಿ ನೋಡುವ ನೋಟದಿ
ಮನಸು ಇಂದು ಮಗ್ನವಾಗಿದೆ ನಿನ್ನ ಪ್ರೇಮ ಪಾಠದಿ
ನಿ ಗೆದ್ದು ನಾ ಸೋಲಬೇಕಿದೆ ನಮ್ಮ ಪ್ರೀತಿಯ ಆಟದಿ

                                       ಶಿವಪ್ರಸಾದ ಮಿಣಜಿಗಿ