Thank you message


Saturday, 21 February 2026

ಕಲ್ಪನೆಗೂ ಮೀರಿದೆ ನಿನ್ನನು ನೆನೆಯದ ಕ್ಷಣಗಳು...

ಕಲ್ಪನೆಗೂ ಮೀರಿದೆ ನಿನ್ನನು ನೆನೆಯದ ಕ್ಷಣಗಳು
ಯೋಚನೆಗೂ ಸಿಲುಕದು ನಿನ್ನನು ನೋಡದ ದಿನಗಳು

ನನ್ನಯ ಅರಿವಿನ ತುಂಬೆಲ್ಲ ನಿನ್ನದೆ ಧ್ಯಾನ
ಕಿವಿಗೊಟ್ಟು ಕೇಳುತಿರಲು ಆಲಿಸುವೆನು ಪ್ರೀತಿಯ ಗಾನ
ನಿ ನಿಲ್ಲದೆ ಮುಗಿಯದು ನನ್ನ ಬಾಳ ಬಂಡಿಯ ಯಾನ

ಬಾಳ ಪಯಣದಿ ಜೊತೆಗಾರ ನಿನ್ನ ಒಲವಿನ ಪ್ರೀತಿಯು 
ನೀನೇ ತಾನೆ ತಿಳಿಯಬಲ್ಲೆ ನನ್ನ ಮನಸಿನ ರೀತಿಯು
ನನ್ನ ಪ್ರತಿ ಹೆಜ್ಜೆಯಲೂ ಬೇಕಿದೆ ನಿನ್ನ ಮಾತಿನ ನೀತಿಯು

                                            ಶಿವಪ್ರಸಾದ ಮಿಣಜಿಗಿ