ಸರಸಕು ನೀನೇ ವಿರಸಕು ನೀನೇ ಓ ನನ್ನ ಗೆಳತಿ
ಬಾಳಿಗೂ ನೀನೇ ಬವಣೆಗೂ ನೀನೇ ಓ ನನ್ನ ಒಡತಿ
ಪ್ರೀತಿಯು ನಿನ್ನಿಂದ ಇಂದು ಸಿಹಿಯಾದ ಜೇನಾಗಿದೆ
ಮನಸು ಮಾಗಿ ನೀಲಿ ಬಣ್ಣದ ಬನಾಗಿದೆ
ತಿಳಿಯುತಿಲ್ಲ ನನಗೆ ಇಗ ಇ ಹೃದಯಕೆ ಏನಾಗಿದೆ
ಹಾಲು ಸಕ್ಕರೆಯ ಸವಿಯಂತೆ ಬೆರೆತಿದೆ ಮನಸು
ಬೀಳುತಿದೆ ಇಗ ನನಗೆ ಮುಂಜಾನೆಯ ನಿನ್ನ ಕನಸು
ಕನಸಲಿ ನಿನ್ನನು ಭೇಟಿಯಾಗುವುದೇ ಒಂದು ಸೊಗಸು
ಶಿವಪ್ರಸಾದ ಮಿಣಜಿಗಿ