ನನ್ನ ಹೃದಯಕೆ ಪ್ರೀತಿಯ ಭಾವನೆಗಳು ವಿನೂತನ
ಪ್ರೀತಿಯು ಇ ಭುವಿಗಿಂತಲೂ ಒಂದು ಘಳಿಗೆ ಸನಾತನ
ಪ್ರೀತಿಯು ಇ ಭುವಿಗಿಂತಲೂ ಒಂದು ಘಳಿಗೆ ಸನಾತನ
ನನ್ನ ಹೃದಯವೆ ಸಿಗಲಿ ನಿನಗೆ ಪ್ರೀತಿಯಲಿ ನೀನು ಕಾಡೋಕೆ
ಒಂದು ಸಣ್ಣ ನಗುವೆ ಸಾಕು ಮನದಿ ಪ್ರೀತಿ ಮೂಡೋಕೆ
ಸಪ್ತಸ್ವರಗಳೆ ಸಾಲದು ಅದ್ಭುತ ಪ್ರೀತಿಯ ರಾಗವ ಹಾಡೋಕೆ
ಬಯಸಿವೆ ನಿನ್ನಯ ಬಿಂಬವೆ ಕಣ್ಣುಗಳು ನೋಡೋಕೆ
ಬೆರಳುಗಳು ಚಡಪಡಿಸಿವೆ ನಿನ್ನಯ ಹೆಸರ ಬರೆಯೋಕೆ
ಜನ್ಮ ಜನ್ಮಕೂ ಸಾಧ್ಯವಾಗದು ನಿನ್ನನು ನಾನು ಮರೆಯೋಕೆ
ಶಿವಪ್ರಸಾದ ಮಿಣಜಿಗಿ