Thank you message


Saturday, 19 December 2020

ಸಿಕ್ಕಿರಲು ನೀನು ನನ್ನ ಪಾಲಿನ ಬೆಳಗಿನ ಕನಸಿಗೆ...

ಸಿಕ್ಕಿರಲು ನೀನು ನನ್ನ ಪಾಲಿನ ಬೆಳಗಿನ ಕನಸಿಗೆ 
ಕ್ಷಣ ಮಾತ್ರದಿ ಹಿಡಿಸಿರುವೆ ನನ್ನಯ ಇ ಮನಸಿಗೆ 

ಹೃದಯದಿ ಪ್ರೀತಿಯ ಒಲವಿನ ತುಂತುರು ಮಳೆಯಾಗಿದೆ 
ಮನಸಿನಲಿ ಸದ್ದಿಲ್ಲದೆ ಪ್ರೀತಿಯ ಬೆಳೆ ಮೂಡಿದೆ 
ಗೊತ್ತಾಗದೆ ಕ್ಷಣಕಾಲದಿ ಪ್ರೀತಿಯ ಬೆಳೆ ಮರವಾಗಿದೆ 

ನಮ್ಮಿಬ್ಬರ ಇ ಜೋಡಿಯು ನೋಡಲು ಸರಿಯಾಗಿದೆ 
ಮನವಿಂದು ನಿನ್ನಯ ಸಿಹಿ ಮಾತಿಗೆ ಸೆರೆಯಾಗಿದೆ 
ನನ್ನ ಬಾಳಿಗೆ ನಿನ್ನಯ ಪ್ರೀತಿಯೆ ವರವಾಗಿದೆ 

                             ಶಿವಪ್ರಸಾದ ಮಿಣಜಿಗಿ