Thank you message


Saturday, 5 December 2020

ಪ್ರೀತಿಯ ಪ್ರಪಂಚವು ನೋಡಲು ಬಲು ಮೋಹಕ...

 ಪ್ರೀತಿಯ ಪ್ರಪಂಚವು ನೋಡಲು ಬಲು ಮೋಹಕ 
ನಿನ್ನ ಪ್ರೀತಿಯ ಪಡೆದಿರಲು ಇ ಜನ್ಮವು ಸಾರ್ಥಕ 

ಹೇಳದೆ ಕೇಳದೆ ಪ್ರೀತಿಯ ಮಳೆಯನು ನೀನು ತಂದೆ 
ನನ್ನಯ ಬಾಳಲಿ ಒಲವಿನ ಲತೆಯಂತೆ ನೀನು ಬಂದೆ 
ಪ್ರೀತಿಯಲಿ ಬೆರತು ಹೋಗಲು ಇ ಎರಡು ಜೀವಗಳು ಒಂದೆ 

ಸುತ್ತಾಡಿದೆ ಮನಸಿಂದು ನೆರಳಿನಂತೆ ನಿನ್ನ ಹಿಂದೆ 
ಕರೆದಾಗಲೆಲ್ಲ ಇ ಹೃದಯವು ಹಾಜರು ನಿನ್ನ ಮುಂದೆ 
ಆಯುಧವಿಲ್ಲದೆ ಪ್ರೀತಿಯಲಿ ನನ್ನನು ನೀನು ಕೊಂದೆ 

                                                  ಶಿವಪ್ರಸಾದ ಮಿಣಜಿಗಿ