Thank you message


Saturday, 28 November 2020

ಪ್ರೀತಿಯ ಸಂತೆಯಲಿ ಮುಂಜಾನೆಯ ಕನಸುಗಳು ಉಚಿತ...

 ಪ್ರೀತಿಯ ಸಂತೆಯಲಿ ಮುಂಜಾನೆಯ ಕನಸುಗಳು ಉಚಿತ 
ನಿನ್ನ ಪ್ರೀತಿಯಲಿ ಹೃದಯವು ಹುಚ್ಚಾಗಿರುವುದು ಖಚಿತ 

ನಿನ್ನಯ ಕಣ್ಣುಗಳು ಇರುವುದು ನನ್ನನು ಕಾಡಲು 
ಹೃದಯವು ಜೀವವ ಪಡೆದಿರುವುದು ಪ್ರೀತಿಯ ಮಾಡಲು 
ಕೋಗಿಲೆಯ ಕಂಠವಿರುವುದು ಸದಾ ಅರುಣರಾಗವ ಹಾಡಲು 

ನಿನ್ನ ಆ ಕಿರುನಗೆಯೆ ಸಾಕು ಹೃದಯಕೆ ಪ್ರಣಯವು ಆಗಲು 
ನಿನ್ನ ಸನಿಹದ ಇರುವಿಕೆಯೆ ಸಾಕು ಪ್ರೀತಿಯಲಿ ನಾನು ಮಾಗಲು 
ಕೈ ಜೋಡಿಸಿ ಜೊತೆಯಲಿ ಬಾರೆ ಬದುಕಲಿ ಬಹು ದೂರ ಸಾಗಲು 

                                                                   ಶಿವಪ್ರಸಾದ ಮಿಣಜಿಗಿ