ಸುಳಿವು ಸಿಗದಂತೆ ಪ್ರೀತಿಯ ಗಂಧವ ಸೂಸುತಿರುವೆ ಏಕೆ
ನಿ ನನ್ನ ಜೊತೆಗಿರಲು ಬದುಕಲಿ ಬೇರೆ ಕ್ಷಣಗಳು ಬೇಕೆ
ನಿ ನನ್ನ ಜೊತೆಗಿರಲು ಬದುಕಲಿ ಬೇರೆ ಕ್ಷಣಗಳು ಬೇಕೆ
ಜುಳುಜುಳು ಹರಿಯುವ ನೀರಿನಲಿ ಪ್ರೀತಿಯ ಕಂಡೆನು ನಾನು
ಕಾಮನಬಿಲ್ಲಿನ ಬಣ್ಣದಿ ಪ್ರೀತಿಯ ಸಿಹಿಯನು ಉಂಡಿದೆ ಬಾನು
ನಿಷ್ಕಲ್ಮಶವಾದ ನನ್ನಯ ಪ್ರೀತಿಗೆ ಕೈಜೋಡಿಸುವೆಯಾ ನೀನು
ಚಂದ್ರ ಕೂಡ ಮರೆಯಲಾರನು ಕನಸಲಿ ಕಂಡ ಹೂವಿನ ನಗುವ
ಪ್ರತಿ ಮುಂಜಾನೆ ಅದೃಷ್ಟವು ಬೇಕೆಂದಿದೆ ನಿನ್ನಯ ಮೊಗವ
ನೀನಿಲ್ಲದೆ ಹೂಯಿಸಲಾಗದು ನನ್ನ ಪ್ರೀತಿಯ ಜಗವ
ಶಿವಪ್ರಸಾದ ಮಿಣಜಿಗಿ