ಒಲವಿಂದ ಶುರುವಾಗಿದೆ ಹೃದಯದಲಿ ಪ್ರೀತಿಯ ಪ್ರಗತಿ
ಕಣ್ಣ ಮರೆಮಾಚುತ ಸುಂಸುಂಮ್ಮನೆ ಯಾಕೆ ನಿ ನಗುತಿ
ಕಣ್ಣ ಮರೆಮಾಚುತ ಸುಂಸುಂಮ್ಮನೆ ಯಾಕೆ ನಿ ನಗುತಿ
ಮೊದಲನೆಯ ಬೇಟಿಯಲಿ ಕಣ್ಣನು ಹೊಡೆದಳು
ಪ್ರೀತಿಯ ಬಲೆಯ ಹಿಡಿದು ನನ್ನ ಬಳಿಗೆ ಸುಳಿದಳು
ಒಲವಿನ ಮಾತುಗಳಿಂದ ನನ್ನನು ಸೆಳೆದಳು
ಗೊತ್ತಾಗದೆ ನನ್ನ ಹೃದಯವನು ವಶಕೆ ಪಡೆದಳು
ಏಳು ಹೆಜ್ಜೆಯ ಸಪ್ತಪದಿಯನು ಜೊತೆಯಲಿ ತುಳಿದಳು
ಬಾಳಿನುದ್ದಕ್ಕೂ ಕೈಹಿಡಿದು ಜೊತೆ ಜೊತೆಯಲಿ ನೆಡೆದಳು
ಶಿವಪ್ರಸಾದ ಮಿಣಜಿಗಿ