ಎಲ್ಲೆ ಇದ್ದರೂ ಹೇಗೆ ಇದ್ದರೂ ಹೃದಯವು ನನ್ನನು ಸೆಳೆಯಲಿ
ನಿನ್ನಯ ನೆನಪು ನೆರಳಿನಂತೆ ಸದಾ ನನ್ನನು ಸುಳಿಯಲಿ
ಹೂ ಒಂದು ಅರಳಲು ಸೂರ್ಯಕಿರಣಗಳ ಸ್ಪರ್ಶವೇ ಕಾರಣ
ನಿನ್ನ ಆ ಒಂದು ಮುಗುಳ್ನಗೆಯೆ ನನ್ನ ಪ್ರೀತಿಗೆ ಪ್ರೇರಣ
ನಿ ನನ್ನ ಜೊತೆಗಿದ್ದರೆ ಸವಿದಂತೆ ಸಿಹಿಯಾದ ಹೂರಣ
ಮಾಡಿರುವೆ ನನ್ನ ಹೃದಯಕೆ ಪ್ರೀತಿಯ ಸರ್ಜರಿ
ನಿನ್ನಿಂದ ನನ್ನ ಬದುಕು ನೆಡೆಯುತಲಿದೆ ಭರ್ಜರಿ
ಪ್ರೀತಿಯು ಒಂದು ಬಣ್ಣಿಸಲಾಗದ ಭೂಲೋಕದ ಅಚ್ಚರಿ
ಶಿವಪ್ರಸಾದ ಮಿಣಜಿಗಿ