Thank you message


Saturday, 31 October 2020

ಹೃದಯದಿ ಪ್ರೀತಿಯ ಕೊಳಲನು ಊದಿದನು ಶಾಮ...

ಹೃದಯದಿ ಪ್ರೀತಿಯ ಕೊಳಲನು ಊದಿದನು ಶಾಮ 
ಹೃದಯವಾಯಿತು ಪ್ರೀತಿಯ ಆನಂದದ ಧಾಮ 

ನೀನಿರಲು ನನ್ನ ಬಾಳಲಿ ಬಾಳೆಲ್ಲ ಹಸಿರಾದಂತೆ 
ನಿನ್ನ ಮಾತುಗಳೆ ನನ್ನ ಎದೆಬಡಿತದ ಉಸಿರಾದಂತೆ 
ಗೊತ್ತಾಗದೆ ಪ್ರೀತಿಯ ಪರಿಮಳ ಹೃದಯದಿ ಹರಿದಾಡಿದಂತೆ 

ಬೆಳದಿಂಗಳ ಒಲವಿನ ಔತಣಕೆ ಸಾಕ್ಷಿಯಾಗಿರುವನು ಚಂದ್ರಮ 
ಹುಚ್ಚು ಹಿಡಿಯುತಲಿದೆ ಪ್ರೀತಿಯ ಅಮಲಿನ ಸಂಭ್ರಮ 
ಒಲವಿನ ನಗುವಿಂದ ನಿತಂದೆ ನನ್ನ ಬಾಳಲಿ ಪೂರ್ಣಿಮಾ 

                                                        ಶಿವಪ್ರಸಾದ ಮಿಣಜಿಗಿ