ಕರಗಿದೆ ನನ್ನಯ ಹೃದಯವು ನಿನ್ನಯ ಪ್ರೀತಿಯ ಪ್ರಣಯಕೆ
ಆ ಮೊದಲ ನೋಟವೆ ಸೆಳೆದಿದೆ ನನ್ನನು ನಿನ್ನಯ ಸನಿಹಕೆ
ಆ ಮೊದಲ ನೋಟವೆ ಸೆಳೆದಿದೆ ನನ್ನನು ನಿನ್ನಯ ಸನಿಹಕೆ
ಬೆರಳುಗಳು ಚಡಪಡಿಸಿವೆ ಸರಿಸಲು ಮುಂಗುರುಳ ಕೇಶ
ಒಮ್ಮೆಯಾದರೂ ಧರಿಸು ನಿ ಪ್ರೀತಿಯ ಅದ್ಭುತವಾದ ವೇಷ
ಹೃದಯಗಳ ಪ್ರೀತಿಯ ಸಮರದಲಿ ಸೋಲುತಿದೆ ದ್ವೇಷ
ಮೂಡಣದಿ ಮುಗಳ್ನಗುತ ಮೂಡುವನು ರವಿ
ಬಾಳಿನಲಿ ಒಮ್ಮೆಯಾದರೂ ಪ್ರೀತಿಯ ಸವಿಯನು ಸವಿ
ಗೊತ್ತಾಗದೆ ನೀನಾಗುವೆ ನಿನ್ನ ಕವಿತೆಗೆ ಕವಿ
ಶಿವಪ್ರಸಾದ ಮಿಣಜಿಗಿ