ಜನ್ಮಜನ್ಮಕೂ ನೀನಾಗಿರು ನನ್ನ ಪ್ರೀತಿಯ ಗೆಳತಿ
ನನ್ನ ಹೃದಯದ ಪ್ರೀತಿಯ ಮನೆಗೆ ನೀನೆ ಒಡತಿ
ನನ್ನ ಹೃದಯದ ಪ್ರೀತಿಯ ಮನೆಗೆ ನೀನೆ ಒಡತಿ
ಕೈಬೀಸಿ ಕರೆಯುತಿದೆ ನಮ್ಮನು ಹೃದಯದ ಹಸಿಮಣಿ
ನಿನ್ನ ಕೊರಳು ಬಯಸುತಿದೆ ಕಟ್ಟಿಸಿಕೊಳ್ಳಲು ಕರಿಮಣಿ
ನನ್ನ ಪ್ರೀತಿಯ ಮಾತಿಗೆ ನೀನೊಮ್ಮೆಯಾದರು ಮಣಿ
ನಿನ್ನದೆ ಭಾವಚಿತ್ರಗಳು ಹೃದಯದ ಕೋಣೆಯಲಿ
ನಿನ್ನ ಹೆಸರೊಂದೆ ಮೂಡುತಿದೆ ಮನಸಿನ ಹಾಳೆಯಲಿ
ನಿನ್ನಿಂದ ಭರವಸೆಯ ಮೂಡಿದೆ ನಾ ಕಾಣದ ನಾಳೆಯಲಿ
ಶಿವಪ್ರಸಾದ ಮಿಣಜಿಗಿ