ದೇವರಲಿ ಕೇಳಿರುವೆನು ನಿನ್ನ ಪ್ರೀತಿಯ ವರ
ಸಪ್ತಪದಿಯ ತುಳಿಯಲು ಕೊಡುವೆಯಾ ನಿನ್ನಯ ಕರ
ನನ್ನ ಬಾಳಲಿ ನೀನೊಂದು ಮಿನುಗುವ ದ್ರುವ ತಾರೆ
ಹುಣ್ಣಿಮೆಯ ಇರುಳ ಕನಸಿನಲಿ ನೀನೊಮ್ಮೆ ಬಾರೆ
ನಿನ್ನ ಬಿಟ್ಟು ಒಂದು ಕ್ಷಣವೂ ನಾನು ಇರಲಾರೆ
ಹೃದಯದ ಪ್ರೀತಿಯ ರಣರಂಗದಿ ಕಹಳೆಯ ಮೊಳಗಿದೆ
ಮನಸಿನ ಹೂದೋಟದಿ ಒಲವಿನ ಹೂ ಒಂದು ಅರಳಿದೆ
ನನ್ನ ಬಾಳು ನಿನ್ನಿಂದ ನಂದಾ ದೀಪವಾಗಿ ಬೆಳಗಿದೆ
ಶಿವಪ್ರಸಾದ ಮಿಣಜಿಗಿ