ಸರಿಗಮಪ ನುಡಿಸಿದೆ ಹೃದಯವು ನಿನ್ನಯ ಉಸಿರಲಿ
ಕಳೆದು ಹೋಗಿದೆ ಮನಸಿಂದು ಪ್ರೀತಿ ಮಲೆನಾಡಿನ ಹಸಿರಿನಲಿ
ಎರಡು ಹೃದಯಗಳಲಿ ಪ್ರೀತಿಯ ಭಾವನೆಗಳ ಆಗಮ
ಮನಸುಗಳಲಿ ವಿರಹದ ವೇದನೆಗಳ ನಿರ್ಗಮ
ಇದುವೆ ಎರಡು ಹೃದಯಗಳ ಮಿಲನದ ಸಮಾಗಮ
ಪ್ರೀತಿಯಲಿ ನಾಕಾಣೆನು ಒಲವಿಗೆ ಯಾಹುದೆ ಬಡತನ
ನಿನ್ನಿಂದಲೆ ತಾನೆ ನನ್ನ ಬಾಳಲಿ ಪ್ರೀತಿಯ ಸಿರಿತನ
ಇ ಹೃದಯದ ದರ್ಬಾರಲಿ ನಿನ್ನದೆ ತಾನೆ ಒಡೆತನ
ಶಿವಪ್ರಸಾದ ಮಿಣಜಿಗಿ