Thank you message


Saturday, 26 September 2020

ನಿನ್ನ ಪ್ರೀತಿಯ ಬರವಸೆಯಲಿ ಇದೆ ಜೀವವು ಜೀವಂತ...

ನಿನ್ನ ಪ್ರೀತಿಯ ಬರವಸೆಯಲಿ ಇದೆ ಜೀವವು ಜೀವಂತ 
ಬಯಸಿದೆ ಇ ಹೃದಯವು ಸದಾ ಕಾಲ ನೀನು ಬೇಕಂತ 

ಮನಸು ಹೃದಯಗಳ ಮಾತಿನಲಿ ನಿನ್ನದೇ ವಿಷಯ 
ನಿನ್ನ ಆ ನಗುವು ತಂದಿದೆ ಬಿಡಿಸಲಾಗದ ನಶೆಯ 
ನಿನ್ನ ಪ್ರೀತಿ ಇಂದ ಶುರುವಾಗಿದೆ ನನ್ನ ಬಾಳಲಿ ದಶೆಯ 

ದೂರದಿಂದಲೆ ಕಣ್ಣುಗಳು ಕುಶಲ ಕ್ಷೇಮದ ಮಾತನಾಡಿವೆ 
ನಿನ್ನ ಅಧರಗಳ ಸಂವೇದನೆಗಳು ನನ್ನನು ಕಾಡಿವೆ 
ಹೃದಯಗಳು ವಿರಹದ ವೇದನೆಯ ಹಂಚಿಕೊಂಡಿವೆ 

                                      ಶಿವಪ್ರಸಾದ ಮಿಣಜಿಗಿ