ಶುರುವಾಗಿದೆ ಹೃದಯದಲಿ ಪ್ರೀತಿ ಹೊಳೆಯ ಹರಿವು
ನಿನ್ನಿಂದಲೇ ನನ್ನ ಸ್ಮ್ರಿತಿಗೆ ದೊರಕಿದೆ ಪ್ರೀತಿಯ ಅರಿವು
ನಿನ್ನಿಂದಲೇ ನನ್ನ ಸ್ಮ್ರಿತಿಗೆ ದೊರಕಿದೆ ಪ್ರೀತಿಯ ಅರಿವು
ಹೃದಯ ಬಡಿತದ ಏರಿಳಿತಕೆ ನಿನ್ನದೇ ಹೊಣೆ
ತೋರಿದೆ ನನ್ನ ಹೆಸರಿನ ಬರಹ ನಿನ್ನಯ ಹಣೆ
ಸಿದ್ಧವಾಗಿದೆ ಹೃದಯ ಮಂಟಪದಲಿ ಒಲವಿನ ಹಸಿಮಣೆ
ವನ್ಯಜೀವಿಗಳ ತವರೂರು ಹಚ್ಚಹಸಿರಿನ ವನವು
ಇ ಹೃದಯದ ವಾಸಸ್ಥಾನವೆ ನಿನ್ನಯ ಆ ಮನವು
ನಿನ್ನಿಂದ ಇನ್ನ ಹೆಚ್ಚಾಗಿದೆ ನಮ್ಮ ಪ್ರೀತಿಯ ಘನವು
ಶಿವಪ್ರಸಾದ ಮಿಣಜಿಗಿ