ನಿನ್ನ ಹಿಂದೆ ನೆರಳಾಗಿ ಸದಾ ನಾ ಬರುವೆನು
ಹೃದಯದ ಮಿಡಿತದಲಿ ಉಸಿರಾಗಿ ನಾ ಇರುವೆನು
ಹೃದಯದ ಮಿಡಿತದಲಿ ಉಸಿರಾಗಿ ನಾ ಇರುವೆನು
ನೀನೆದುರು ಬರಲು ಹೆಚ್ಚಾಗಿದೆ ಹೃದಯದ ಬಡಿತ
ನಿನ್ನಿಂದಲೇ ಶುರುವಾಗಿದೆ ಪ್ರೀತಿಯ ಒಲವಿನ ಮಿಡಿತ
ಬಡಿಸಲಾಗದ ಬಲೆಯು ಆ ನಿನ್ನ ಗುಂಗಿನ ಹಿಡಿತ
ನಿಷ್ಕಲ್ಮಶ ಪ್ರೀತಿಯ ಕಾಣಬವುದು ಆ ಪಕ್ಷಿಯಲಿ
ನನ್ನಯ ಬಿಂಬವ ನಾ ನೋಡುತಿರುವೆನು ಆ ನಿನ್ನ ಅಕ್ಷಿಯಲಿ
ಏಳು ಹೆಜ್ಜೆಯ ತುಳಿಯೋಣ ಬಾರೆ ಆ ದೇವರ ಸಾಕ್ಷಿಯಲಿ
ಶಿವಪ್ರಸಾದ ಮಿಣಜಿಗಿ