Thank you message


Saturday, 29 August 2020

ನನ್ನ ಹೃದಯ ನನ್ನ ಮನದ ಒಳಗೆ ಕಳುವಾಗಿದೆ...

ನನ್ನ ಹೃದಯ ನನ್ನ ಮನದ ಒಳಗೆ ಕಳುವಾಗಿದೆ 
ನಿನ್ನ ಮೇಲೆ ಒಲವಾಗಿರುವ ಸೂಚನೆ ಬಲವಾಗಿದೆ 

ನೆನಪಿದೆಯಾ ನಾವಿಬ್ಬರು ಮೊದಲ ಭೇಟಿಯಾದ ಜಾಗ 
ಹೃದಯವಿಂದು ಹಾಡುತಿದೆ ನಿನ್ನದೇ ಒಲವಿನ ರಾಗ 
ಸಮಯ ಹೋದ ಪರಿವೇ ಇಲ್ಲಾ ನಿನ್ನನೆ ನಾ ನೋಡುತಿರುವಾಗ 

ಮನದಲಿ ಶುರುವಾಗಿದೆ ನಿನ್ನ ಪ್ರೀತಿಯ ಪಡೆಯಲು ಯಾಗ 
ನಿನಗಾಗಿ ಸಿದ್ಧವಾಗಿದೆ ಹೃದಯವು ಉಸಿರನು ಕೂಡಾ ಮಾಡಲು ತ್ಯಾಗ 
ಕೊಡಬಾರದೆ ನೀನು ತಡಮಾಡದೆ ಪ್ರೀತಿಯ ವರವನು ಬೇಗ

                                                 ಶಿವಪ್ರಸಾದ ಮಿಣಜಿಗಿ