Thank you message


Saturday, 22 August 2020

ಏಕದಂತನೆ ವಕ್ರತುಂಡನೆ ನಿನಗೆ ನಮ್ಮ ನಮನ...

ಏಕದಂತನೆ ವಕ್ರತುಂಡನೆ ನಿನಗೆ ನಮ್ಮ ನಮನ 
ಸದಾ ಇರಲಿ ನಮ್ಮ ಮೇಲೆ ನಿರ್ವಿಗ್ನದ ನಿನ್ನ ಗಮನ 

ಜಗವಾಗಿದೆ ಇಂದು ಅಕ್ಷರಗಳ ಮೂಡದ ಬಳಪ 
ಮನುಕುಲವೆ ಬಳಲಿದೆ ನೀನೊಮ್ಮೆ ನೋಡೋ ಗಣಪ 
ಎಲ್ಲರ ಬಾಳಲಿ ಮೂಡಿಸು ಬಾರೋ ಆಶಾಕಿರಣದ ಹೊಳಪ 

ರೋಗರುಜುನಿಗಳ ದುಃಖದುಮ್ಮಾನದ ವಿಗ್ನಗಳನು ಸರಿಸು 
ನಿಂತ ದೋಣಿಗೆ ಉಟ್ಟು ಹಾಕಲು ಆತ್ಮಬಲವನು ಬರಿಸು 
ನೊಂದು ಬೆಂದು ಬಳಲಿದ ಜೀವಕೆ ನಗುವ ನೀನೊಮ್ಮೆ ತರಿಸು 

                                                    ಶಿವಪ್ರಸಾದ ಮಿಣಜಿಗಿ