Thank you message


Saturday, 13 January 2018

ಎರಡು ಮನಸುಗಳು ಕೈ ಜೋಡಿಸಿ ಬಾನಿಗೆ ಹಾರಿವೆ...

ಎರಡು ಮನಸುಗಳು ಕೈ ಜೋಡಿಸಿ ಬಾನಿಗೆ ಹಾರಿವೆ 
ಮೋಡಗಳ ಜಾರುಬಂಡೆಯಲಿ ಸಂತಸದಿಂದ ಜಾರಿವೆ 


ನಿನ್ನಿಂದಲೆ ಪ್ರೀತಿಯ ಅಮಲನು ನಾ ಅರಿವೆ 
ಪ್ರೀತಿಯ ಒಪ್ಪುಗೆಗೆ ಯಾವಾಗ ನಿನ್ನ ಮೌನವನು ಮುರಿವೆ
ಒಂದು ಕ್ಷಣ ಕಣ್ಣಿಗೆ ಗೋಚರಿಸಿ ಯಾಕೆ ನಿ ಮರೆಗೆ ಸರಿವೆ  

ಕನವರಿಕೆಯ ಮಾತಲ್ಲೂ ನಿನ್ನ ಹೆಸರ ನಾ ಕರೆವೆ 
ನಿ ಬರುವ ದಾರಿಗೆ ಮುತ್ತು ರತ್ನಗಳ ನಾ ಸುರಿವೆ 
ಮಣ್ಣಲ್ಲಿ ಮಣ್ಣಾದರೂ ನಿನ್ನನೆ ನಾ ಬೆರೆವೆ 

                                 ಶಿವಪ್ರಸಾದ ಮಿಣಜಿಗಿ