Thank you message


Saturday, 6 January 2018

ನಿನ್ನ ನಗುವಿನ ನೆನಪಲಿ ಎಲ್ಲ ನೋವನು ಮರೆವೆ...

ನಿನ್ನ ನಗುವಿನ ನೆನಪಲಿ ಎಲ್ಲ ನೋವನು ಮರೆವೆ 
ನನ್ನಯ ಹೃದಯದಲಿ ನಿನ್ನ ಹೆಸರನು ನಾ ಬರೆವೆ 

ನಿನ್ನಯ ಪ್ರೀತಿಯೆ ನನ್ನ ಬಾಳಿನ ವರವು 
ನಿನ್ನ ಹೆಸರೆ ಹೇಳುತಿದೆ ಕೋಗಿಲೆಯ ಆ ಸ್ವರವು 
ನಿನ್ನ ಬೆರಳಿನ ಸ್ಪರ್ಶ ಬಯಸಿದೆ ನನ್ನ ಇ ಕರವು 

ಸದಾ ಸೆಳೆದಿದೆ ನನ್ನನು ಆ ನಿನ್ನ ಒಲವು 
ನನ್ನನು ನಿದ್ದೆಗೆಡಿಸಿದೆ ನಿನ್ನ ಪ್ರೀತಿಯ ಛಲವು 
ನಿನ್ನಯ ಪಡೆಯುವುದೆ ನನ್ನ ಬಾಳಿನ ಗೆಲುವು 

                             ಶಿವಪ್ರಸಾದ ಮಿಣಜಿಗಿ