ಎರಡು ಹೃದಯಗಳು ಏಕಾಂತದಿ ಕುಳಿತು ಮಾತಾಡಿವೆ
ಹೇಳಲು ಇನ್ನೂ ನೂರಾರು ವಿಷಯಗಳು ಬಾಕಿ ಇವೆ
ನಿನ್ನ ಪ್ರೀತಿಯ ಒಪ್ಪಿಗೆಗೆ ಮನವಿಂದು ತೇಲಾಡಿದೆ
ಆಕಾಶದಿ ಬಾನಾಡಿಯಂತೆ ಸ್ಚಚ್ಛಂದವಾಗಿ ಹಾಡದಿದೆ
ಒಳಗೊಳಗೆ ಮುಗುಳ್ನಗುತ ಹೃದಯವು ನಲಿದಾಡಿದೆ
ಸೂರ್ಯನ ಬೆಳಕಿನ ಸ್ಪರ್ಶದಿ ಇಬ್ಬನಿಯು ಕುಣಿದಾಡಿದೆ
ಪ್ರಕೃತಿಯಲಿ ಕಾಣದಿರುವ ಪ್ರೀತಿಯ ನಂಟುಗಳು ನೂರಾರಿವೆ
ಪ್ರೀತಿಯ ಭಾವನೆಗಳನು ಅರ್ಥೈಸಿಕೊಳ್ಳುವ ಮನಸೊಂದು ಬೇಕಾಗಿದೆ
ಶಿವಪ್ರಸಾದ ಮಿಣಜಿಗಿ