ನನ್ನ ಬೆರಳುಗಳಿಗೆ ಕೈ ಬೀಸಿ ಕರೆದಿದೆ ಆ ನಿನ್ನ ಜಡೆ
ಪ್ರೀತಿಯ ಮಳೆಯಲಿ ಇಡಿಯಲೆ ನಿನಗೆ ಒಲವಿನ ಕೊಡೆ
ಸೆಳೆದಿದೆ ಮನದಾಳದ ತವಕ ಸದಾ ನಿನ್ನ ಕಡೆ
ಪ್ರೀತಿಯ ಕೋಟೆಯನು ಭೇದಿಸಲು ಕಣ್ಣಿನ ನೋಟಗಳೆ ಸೇನಾಪಡೆ
ಹೊಸ್ತಿಲಲಿ ನಿಂತಿರುವ ಹೃದಯಕೆ ಒಳಗೆ ಬರುವ ಅನುಮತಿ ಕೊಡೆ
ಪ್ರಕೃತಿಯಲಿ ನಾಕಾಣೆನು ಪ್ರೀತಿಯ ಹುಟ್ಟುವಿಕೆಗೆ ಯಾವ ತಡೆ
ಹುಚ್ಚು ಹಿಡಿಸಿದೆ ನನ್ನ ಹೃದಯಕೆ ಆ ನಿನ್ನ ಹಂಸ ನಡೆ
ನನ್ನ ಪ್ರೀತಿಯ ಒಪ್ಪಿಕೊಳ್ಳುತಾ ನಿನ್ನ ಛಲವನು ಬಿಡೆ
ಶಿವಪ್ರಸಾದ ಮಿಣಜಿಗಿ