Thank you message


Saturday, 16 December 2017

ಹರಿಸು ಬಾ ನೀನು ನನ್ನ ಬಾಳಲಿ ಪ್ರೇಮದ ಹೊಳೆ...

ಹರಿಸು ಬಾ ನೀನು ನನ್ನ ಬಾಳಲಿ ಪ್ರೇಮದ ಹೊಳೆ 
ಬಿತ್ತು ನಿ ನನ್ನ ಮನಸಲಿ ಪ್ರೀತಿಯ ಬೆಳೆ 

ಹಸಿರಿನಿಂದ ಬಂದಿದೆ ವಸಂತ ಮಾಸಕೆ ಕಳೆ 
ಕೋಗಿಲೆಯ ಗಾನದಿಂದ ನನ್ನನು ನಿ ಸೆಳೆ 
ಸದಾ ಆಗಿರಲಿ ನನ್ನ ಹೃದಯವೆ ನಿನ್ನಯ ನೆಲೆ 

ಸುರಿದಿದೆ ಭುವಿಗೆ ಆಕಾಶವು ಒಲವಿನ ಮಳೆ 
ನಾಚಿದೆ ಆ ಒಲವಿನ ಮಳೆಗೆ ಸೊಬಗಿನ ಇಳೆ 
ತೊಳೆದು ಹೋಗಿದೆ ವಿರಹದ ಅಂಧಕಾರದ ಕೊಳೆ 

                                   ಶಿವಪ್ರಸಾದ ಮಿಣಜಿಗಿ