Thank you message


Saturday, 25 November 2017

ಕಟ್ಟಿಸಲೇ ಬೇಕಿಲ್ಲ ಪ್ರೀತಿಗೆ ನೆನಪಿನ ಸ್ಮಾರಕ...

ಕಟ್ಟಿಸಲೇ ಬೇಕಿಲ್ಲ ಪ್ರೀತಿಗೆ ನೆನಪಿನ ಸ್ಮಾರಕ 
ಇದ್ದರೆ ಸಾಕು ಅವಳ ನೆನಪು ನಿನ್ನ ಸ್ಮ್ರಿತಿಯಲಿ ಜ್ಞಾಪಕ 

ಪ್ರೀತಿಯಲಿ ಪ್ರತಿ ಘಳಿಗೆಯೂ ತುಂಬಾ ಕೌತುಕ 
ನಿನ್ನ ಪ್ರೀತಿಯ ಸೇವೆಗೆ ಮಾಡಿಕೊ ನನ್ನನು ನೇಮಕ 
ಬಾಳಿನುದ್ದಕ್ಕೂ ನಾನಾಗಿರುವೆ ನಿನ್ನ ಪ್ರೀತಿಯ ಸೇವಕ 

ಪ್ರೇಮಿಗಳಿಗೆ ಮಾತ್ರ ತಿಳಿದಿದೆ ಪ್ರೀತಿಯ ಆ ಸುಖ 
ಯಾವ ಕಡೆ ತಿರುಗಿದರು ಕಾಣುತಿಹುದು ನಿನ್ನ ಮುಖ 
ಕೈಜೋಡಿಸು ಬಾ ನೀನೊಮ್ಮೆ ನಾನೆ ನಿನ್ನ ಬಾಳಿನ ಸಖ 

                                                     ಶಿವಪ್ರಸಾದ ಮಿಣಜಿಗಿ