Thank you message


Saturday, 4 November 2017

ಇಹಲೋಕದ ಕಷ್ಟಗಳಿಂದ ಇ ಜೀವನವನು ಉಳಿಸು...

ಇಹಲೋಕದ ಕಷ್ಟಗಳಿಂದ ಇ ಜೀವನವನು ಉಳಿಸು 
ದುಃಖ್ಖದ ಕಾರ್ಮೋಡದಿಂದ ಕೂಡಿದ ಕ್ಷಣಗಳ ನಿ ಮರೆಸು 

ನಮ್ಮ ಎಲ್ಲಾ ವೇದನೆಯ ವಿಷಯಗಳನು ನಿ ಕೇಳು 
ಆಲಿಸು ಕಿವಿಗೊಟ್ಟು ನೀನೊಮ್ಮೆ ನಮ್ಮ ಇ ಗೋಳು 
ನೊಂದ ಇ ಮನಸಿಗೆ ಸಾಂತ್ವನವ ನಿ ಹೇಳು 

ಓ ಮನಸೇ ಸಂಕಷ್ಟದ ಸುಳಿಯಿಂದ ಮೇಲೆ ನಿ ಏಳು 
ಕಷ್ಟದ ಕ್ಷಣಗಳಿಗೆ ಹೆದರಿ ಮಾಡಬೇಡ ಅಮೂಲ್ಯ ಜೀವನ ಹಾಳು 
ಕತ್ತಲು ಸರಿದು ಬೆಳಕು ಮೂಡುತ ಉದಯಿಸಲಿ ಹೊಸ ಬಾಳು 

                                                               ಶಿವಪ್ರಸಾದ ಮಿಣಜಿಗಿ