Thank you message


Saturday, 28 October 2017

ಹೃದಯವೆಂಬ ಗರ್ಭಗುಡಿಯ ಮಲಿನ ನಿ ಮಾಡಬೇಡ...

ಹೃದಯವೆಂಬ ಗರ್ಭಗುಡಿಯ ಮಲಿನ ನಿ ಮಾಡಬೇಡ 
ಜೀವನದ ಹಾಡನು ಲಯ ತಪ್ಪಿಸಿ ನಿ ಹಾಡಬೇಡ 

ಹುಚ್ಚು ಕುದುರೆಯ ಇ ಮನಸನು ನಿ ಹಿಡಿದಿಡು 
ಎಲ್ಲಾ ಅತಿಆಶಯದ ಕೆಟ್ಟ ಭಾವನೆಗನು ತಡೆದಿಡು 
ಮನಸನು ಕಲ್ಮಶಗೊಳೊಸಿದ ಕ್ಷಣಗಳನು ನಿ ಬರೆದಿಡು 

ಕೆಟ್ಟ ಮನಸಿನ ಆಸೆಗಳಿಂದ ಪ್ರೋತ್ಸಹ ಪಡೆಯದಿರು 
ನಿನ್ನಯ ಮನಸಿಗೆ ನೀನೆ ಸುಳ್ಳನು ಎಂದೂ ನುಡಿಯದಿರು 
ಕೆಟ್ಟ ಮನಸಿನ ಜೊತೆ ಒಳ್ಳೆಯ ಚಿಂತನೆಯ ಮನಸಿರುವುದ ನಿ ಮರೆಯದಿರು

                                                                     ಶಿವಪ್ರಸಾದ ಮಿಣಜಿಗಿ