ಮಗುವಿನಂತೆ ಗೀಚುತಿರುವೆ ನಿನ್ನ ಹೆಸರ ಬಳಪದಲಿ
ಗೋಚರಿಸು ಕಣ್ಣಮುಂದೆ ನೀನೊಮ್ಮೆ ಧ್ರುವ ತಾರೆಯ ಹೊಳಪಿನಂತೆ
ಬಯಸಿದೆ ಇ ಹೃದಯ ಸದಾ ಇರಲು ನಿನ್ನ ಸನಿಹದಲಿ
ಬಕಪಕ್ಷಿಯಂತೆ ನಿನ್ನ ಕಾದೆನು ನೀನಿರದ ವಿರಹದಲಿ
ನಿನ್ನ ನಾ ಹೇಗೆ ಬಣ್ಣಿಸಲಿ ನನ್ನ ಇ ಕೈ ಬರಹದಲಿ
ಕರೆದಿದೆ ಭುವಿ ಇಂದು ವರುಣನನು ಪ್ರೀತಿಯ ಒಲವಿನಲಿ
ಸವರಿವೆ ಮಳೆಹನಿಗಳು ಭುವಿಯ ಅಧರವನು ಬೆರಳಿನಲಿ
ತೊಡಿಸಿವೆ ಹಸಿರ ಮಲೆನಾಡಿನ ಮಾಲೆಯನು ಭುವಿಯ ಕೊರಳಿನಲಿ
ಶಿವಪ್ರಸಾದ ಮಿಣಜಿಗಿ