Thank you message


Saturday, 23 September 2017

ಕಣ್ಣುಗಳ ರೆಪ್ಪೆ ಇಲ್ಲದೆ ನಿದಿರೆ ಮಾಡಲು ಆಗದು...

ಕಣ್ಣುಗಳ ರೆಪ್ಪೆ ಇಲ್ಲದೆ ನಿದಿರೆ ಮಾಡಲು ಆಗದು 
ನಿನ್ನಯ ಒಪ್ಪಿಗೆ ಇಲ್ಲದೆ ಪ್ರೀತಿಯ ಪಯಣ ಸಾಗದು 

ನಿನ್ನ ಪ್ರೀತಿಯ ಹುಚ್ಚು ಎಂದೆಂದೂ ನನ್ನ ಬಿಟ್ಟು ಹೋಗದು 
ನಿನ್ನಯ ಅನುಗ್ರಹವಿಲ್ಲದೆ ಪ್ರೇಮದ ಹಣ್ಣು ಮಾಗದು 
ನಿನ್ನ ಪ್ರೀತಿಯ ವಿಷಯದಲಿ ಮನವೆಂದು  ರಾಜಿಯಾಗದು 

ನೀರ ಬಿಟ್ಟು ಮೀನು ಒಂದು ಕ್ಷಣ ಕೂಡ ಇರದು 
ಎಲ್ಲಾ ಜನ್ಮದಲೂ ನೀನಾಗಿರು ನನ್ನ ಬಾಳಿಗೆ ವಧು 
ಸದಾ ನಮ್ಮ ಜೀವನದಲಿ ತುಂಬಿರಲಿ ಜೇನಿನ ಮಧು

                                          ಶಿವಪ್ರಸಾದ ಮಿಣಜಿಗಿ