Thank you message


Saturday, 16 September 2017

ಆಕಾಶ ಭೂಮಿಗೆ ಇಂದು ನಾಕಾಣೆನು ಯಾವ ಅಂತರ...

ಆಕಾಶ ಭೂಮಿಗೆ ಇಂದು ನಾಕಾಣೆನು ಯಾವ ಅಂತರ 
ಅನಿಸುತಿದೆ ಯಾಕೊ ಹೀಗೆ ನಿನ್ನ ನೋಡಿದ ನಂತರ 

ನಿನ್ನ ಆ ತುಟಿಗಳಿಂದ ನನ್ನ ಕೆನ್ನೆಯ ನೇವರಿಸು 
ನನ್ನ ಮನಸೆಲ್ಲ ಸದಾ ನಿನ್ನ ಛಾಯೆಯಿಂದ ಆವರಿಸು 
ನನ್ನ ಪ್ರೀತಿಯ ಗುಂಗಲಿ ಸದಾ ನಿ ತೂಕಡಿಸು 

ಪ್ರೀತಿಯ ಪರೀಕ್ಷೆಯಲಿ ಪಾಸಾಗಲು ಚುರು ನಿ ಸಹಕರಿಸು 
ನಿನ್ನ ಜೊತೆಗಿರುವ ಆ ಕ್ಷಣಗಳ ಪದೇ ಪದೇ ಮರುಕುಳಿಸು 
ಓ ಮನವೆ ಅವಳ ಆ ಒಲವಿನ ನಾಲ್ಕು ಹೆಜ್ಜೆಗಳ ಸದಾ ನಿ ಅನುಕರಿಸು 

                                                             ಶಿವಪ್ರಸಾದ ಮಿಣಜಿಗಿ