Thank you message


Saturday, 2 September 2017

ಒಳ್ಳೆಯ ಬಾಳಿಗೆ ನೀನರಿಯೋ ಸ್ನೇಹ ಪ್ರೇಮದ ಮಂತ್ರ...

ಒಳ್ಳೆಯ ಬಾಳಿಗೆ ನೀನರಿಯೋ ಸ್ನೇಹ ಪ್ರೇಮದ ಮಂತ್ರ 
ಮಾಡಬೇಡ ಬಾಳಲಿ ಸ್ನೇಹವ ಕೊಲ್ಲುವ ಕುತಂತ್ರ 

ಸ್ನೇಹದ ಶಬ್ದಕೋಶದಿ ನಾಕಾಣೆನು ಮತಾಂತರ 
ಭಾವನೆಗಳಿಗೆ ಇಲ್ಲಿ ಇರುವುದು ಹಂಚಿಕೊಳ್ಳುವ ಸ್ವತಂತರ 
ಸ್ನೇಹ ಪ್ರೇಮದ ಬಂದನದಲಿ ಇರದು ಯಾವ ಅತಂತರ 

ಸ್ನೇಹ ಸಂಭಂದವ ಬೆಸೆಯಲು ಬೇಕಿಲ್ಲ ಯಾವ ಯಂತ್ರ 
ಎರಡು ಮನಸುಗಳು ಬೆರೆಯಲು ಬೇಕಿದೆ ಪ್ರೇಮದ ತಂತ್ರ 
ಸ್ನೇಹ ಪ್ರೇಮ ಗೊತ್ತಿಲ್ಲದ ಬಾಳೆ ಒಂದು ದೊಡ್ಡ ಅತಂತರ 

                                                         ಶಿವಪ್ರಸಾದ ಮಿಣಜಿಗಿ