Thank you message


Saturday, 26 August 2017

ಗೌರಿ ಸುತನೆ ಲಂಭೋಧರನೆ ದಯವನು ನಮಗೆ ಪಾಲಿಸು...

ಗೌರಿ ಸುತನೆ ಲಂಭೋಧರನೆ ದಯವನು ನಮಗೆ ಪಾಲಿಸು 
ವಕ್ರತುಂಡನೆ ಪ್ರಸನ್ನವಧನೆ ವಿದ್ದೆಯ ವರವನು ಕರುಣಿಸು 

ಫಲ ಪುಷ್ಪ ಮೋದಕದಿಂದ ಚಾಮರಕರ್ಣನ ಪೂಜಿಸು 
ಹಾಡುತ ಹೊಗಳುತ ಪ್ರಥಮ ಪೂಜಿತನ ಭಜಿಸು 
ಸದಾ ಕಾಲ ಮನದಲಿ ಗಜವಧನನ ನಿ ಸ್ಮರಿಸು

ಮೋದಕ ಪ್ರೀಯನೆ ವಿಜ್ಞೇಶ್ವರನೆ ವಿಗ್ನವ ದೂರ ಸರಿಸು 
ವಿದ್ಯಾಧರನೆ ಬುದ್ಧಿಪ್ರಧಾಯನೆ ಜ್ಞಾನವ ನಿ ಸುರಿಸು 
ಬಾಲಚಂದ್ರನೆ ಘಜಕರ್ಣನೆ ನಿರ್ವಿಗ್ನದ ಹೊಳೆಯ ಹರಿಸು

                                            ಶಿವಪ್ರಸಾದ ಮಿಣಜಿಗಿ