Thank you message


Saturday, 19 August 2017

ಹೃದಯದಿ ನಿನ್ನಯ ಹೆಸರಿರಲು ನನ್ನಯ ಉಸಿರಿನ್ನೇಕೆ...

ಹೃದಯದಿ ನಿನ್ನಯ ಹೆಸರಿರಲು ನನ್ನಯ ಉಸಿರಿನ್ನೇಕೆ 
ಮನದಲಿ ನಿನ್ನಯ ನೆನೆಪಿರಲು ಮುಂಜಾನೆಯ ಕನಸು ಬೇಕೆ 

ನಿ ನನ್ನ ಸನಿಹವಿರಲು ಮರು ಕ್ಷಣದ ಚಿಂತೆ ಏಕೆ 
ನಿನ್ನನೆ ಬೇಡುತಿರುವ ಇ ಜೀವಕೆ ಮುಗುಳನಗೆ ಒಂದೆ ಸಾಕೆ 
ಪ್ರೀತಿಯಲಿ ಬಿದ್ದ ಮೇಲೆ ಸದಾ ನೀನಾಗಿರು ಬಲು ಜೋಕೆ 

ಹೃದಯದ ಸಾಗರದಿ ಪ್ರೀತಿಯ ಸುಳಿಗೆ ನನ್ನನು ನಿ ನೂಕು 
ಪ್ರೀತಿಯ ಮೃದು ಸ್ಪರ್ಶದಿಂದ ಇ ಮನವನು ನಿ ಸೊಕು 
ಆಕಾಂಕ್ಷಗಳ ಜೋಗದ ತುದಿಯಿಂದ ಭರವಸೆಯ ಭೂವಿಗೆ ನನ್ನನು ದೂಕು 

                                                                                    ಶಿವಪ್ರಸಾದ ಮಿಣಜಿಗಿ