Thank you message


Saturday, 12 August 2017

ತೇಲುವ ಅಲೆಗಳಿಗೆ ತೀರವನು ಅಪ್ಪುವ ತವಕ...

ತೇಲುವ ಅಲೆಗಳಿಗೆ ತೀರವನು ಅಪ್ಪುವ ತವಕ 
ನಾ ನಿನ್ನ ಹುಚ್ಚು ಕನಸುಗಳ ಕಾಯುವ ಸೇವಕ 

ಪ್ರೀತಿಯ ಮುಂಜಾವಿನ ಪರದೆಯನು ನಿ ಸರಿಸು 
ಪ್ರೇಮದ ಕಿರಣಗಳನು ಹೃದಯದ ಭುವಿಗೆ ತರಿಸು 
ಎಲೆಗಳ ಮೇಲೆ ಆನಂದಭಾಷ್ಪದ ಪನ್ನೀರಿನ ಹನಿಗಳ ಸುರಿಸು 

ಕಾಣದ ಕಣ್ಣುಗಳಿಗೆ ಪ್ರೀತಿಯ ಕನ್ನಡಕವ ಧರಿಸು 
ಸದಾ ಕಾಲ ಎಲ್ಲೆಡೆಯೂ ಪ್ರೀತಿಯ ಹೊಳೆಯನು ಹರಿಸು 
ದೇವರು ಕೊಟ್ಟ ಇ ಪ್ರೀತಿಯ ವರವನು ಎಂದೆಂದೂ ನಿ ಸ್ಮರಿಸು 

                                                                 ಶಿವಪ್ರಸಾದ ಮಿಣಜಿಗಿ