ಮಧುರವಾದ ಮೈತ್ರಿಗಾಗಿ ಹೃದಯ ನಿನಗೆ ಕರೆಯುತಿದೆ
ನನ್ನ ಹೆಸರನು ತೊದಲ ದನಿಯಲಿ ನಿನ್ನ ಅಧರಗಳು ನುಡಿಯುತಿವೆ
ಏನೆ ಗೀಚಲು ಹೋದರೂ ನಾ ನಿನ್ನ ಹೆಸರ ಬೆರಳು ಬರೆಯುತಿದೆ
ಪ್ರೀತಿಯ ಆಕಾಶದಿ ವಿರಹದ ಕಾರ್ಮೋಡ ಸರಿಯುತಿದೆ
ಗಾಳಿಯ ಸ್ಪರ್ಶವು ಪ್ರೀತಿಯ ಮಳೆಯನು ತರಿಸುತಿದೆ
ದಣಿದ ಹೃದಯವು ನಿನ್ನ ಒಲವಿನ ಎದೆಗೆ ಒರಗುತಿದೆ
ನಿನ್ನ ಸ್ಪರ್ಶದ ಹರ್ಷವನು ಸದಾ ಮನಸು ಬಯಸುತಿದೆ
ಚಂದ್ರನ ಪ್ರತಿಬಿಂಬವು ನಿನ್ನಯ ನಗುವಲಿ ಕಾಣುತಿದೆ
ಶಿವಪ್ರಸಾದ ಮಿಣಜಿಗಿ