Thank you message


Saturday, 29 July 2017

ನೀನೊಂದು ಮರೆತರು ಮರೆಯಲಾಗದ ಜ್ಞಾಪಕ...

ನೀನೊಂದು ಮರೆತರು ಮರೆಯಲಾಗದ ಜ್ಞಾಪಕ 
ನಿನ್ನೊಂದಿಗೆ ಪ್ರತಿ ಕ್ಷಣವೂ ಹೊಸದೊಂದು ಕೌತುಕ 

ನನ್ನ ಹಗಲಿರುಳಿಗೆ ಬೇಕು ನಿನ್ನ ಕನಸುಗಳ ಭ್ರಮಣ 
ಎಲ್ಲೆನಿ ಇದ್ದರೂ ಸೆಳೆಯುತಿದೆ ನಿನ್ನ ಕಡೆಗೆ ನನ್ನ ಗಮನ 
ಮಾಡು ಬಾ ನೀನೊಮ್ಮೆ ಮನದಾಳದ ವಿರಹದ ದಮನ 

ನಿನ್ನ ಕುಡಿ ನೋಟವೆ ಪ್ರೀತಿಯ ಪ್ರಾರಂಭಕೆ ಪ್ರೇರಣ 
ಯಾವ ಯಜ್ಞಯಾಗಾದಿಗಳು ಬೇಕಿಲ್ಲ ಮಾಡಲು ಪ್ರೀತಿಯ ಧಾರಣ 
ಜಗದಲಿ ಪ್ರೀತಿಯ ಇರುವಿಕೆಗೆ ನಮ್ಮಂತಹ ಹುಚ್ಚು ಹೃದಯಗಳೆ ಕಾರಣ 

                                                                                 ಶಿವಪ್ರಸಾದ ಮಿಣಜಿಗಿ