Thank you message


Saturday, 22 July 2017

ನಿನ್ನ ಕಣ್ಣುಗಳ ನೋಟವೆ ಹೃದಯದ ಆಘಾತಕೆ ಅಹ್ವಾನ...

ನಿನ್ನ ಕಣ್ಣುಗಳ ನೋಟವೆ ಹೃದಯದ ಆಘಾತಕೆ ಅಹ್ವಾನ 
ಹೇಳು ಬಾ ನನ್ನ ಹೃದಯಕೆ ನಿನ್ನ ಪ್ರೀತಿಯ ಸಾಂತ್ವನ 

ಜೀವನದಲಿ ಪ್ರೀತಿಯು ಬಯಸದೆ ಸಿಗುವ ಸನ್ಮಾನ 
ನಮ್ಮಿಬ್ಬರ ಮಿಲನಕೆ ಪ್ರೀತಿಯೆ ದೊಡ್ಡ ಬಹುಮಾನ 
ನಿನ್ನ ಪ್ರೀತಿ ಒಂದಿದ್ದರೆ ಸಾಕು ಬೇಕಿಲ್ಲ ಯಾವ ವರಮಾನ 

ನಿನ್ನ ಸಂದೇಶವ ಹೊತ್ತು ತಂದಿದೆ ಪವಮಾನ 
ನಮ್ಮ ಪ್ರೀತಿಯ ತೂಗಲು ಸಾಲದು ಯಾವ ಪರಿಮಾಣ 
ನನ್ನ ನಿಷ್ಕಲ್ಮಶ ಪ್ರೀತಿಯ ಮೇಲೆ ನಿ ಮಾಡಬೇಡ ಅನುಮಾನ 

                                                               ಶಿವಪ್ರಸಾದ ಮಿಣಜಿಗಿ