Thank you message


Saturday, 15 July 2017

ಪ್ರೀತಿಯ ಪೂಜೆಗೆ ನಿನ್ನ ಹೃದಯವೆ ಮೊದಲ ಆಧ್ಯತೆ...

ಪ್ರೀತಿಯ ಪೂಜೆಗೆ ನಿನ್ನ ಹೃದಯವೆ ಮೊದಲ ಆಧ್ಯತೆ 
ನೀನಿದ್ದರೆ ಮಾತ್ರ ನನ್ನ ದೇಹದಿ ಜೀವ ಇರುವ ಸಾಧ್ಯತೆ 

ಆ ನಿನ್ನ ಮೌನದ ನೋಟವು ಸದಾ ನನ್ನ ಕಾಡಿತು 
ಹೇಳದೆ ಕೇಳದೆ ಸಮಯವು ಹಾಗೆ ಮುಂದೆ ಸಾಗಿತು 
ನಿನ್ನಯ ಹುಚ್ಚು ಪ್ರೀತಿಗೆ ನನ್ನ ಮನ ತಲೆ ಬಾಗಿತು 

ನನ್ನ ಹೃದಯ ಸದಾ ನಿನ್ನ ಉಸಿರನು ಬೇಡಿತು 
ಉಸಿರಾಟದ ಕ್ರಿಯೆಯಲಿ ನಿನ್ನ ಪ್ರೀತಿಯು ಮೂಡಿತು 
ನನ್ನ ಮನಸು ನಿನ್ನೊಂದಿಗೆ ಬ್ರಹ್ಮಗಂಟಿನಂತೆ ಬೆಸೆಯಿತು 

                                                        ಶಿವಪ್ರಸಾದ ಮಿಣಜಿಗಿ